|| ಶ್ರೀ ಸಾಂಬ ಪರಮೇಶ್ವರಾಯ ನಮಃ || ಶ್ರೀ ಸದ್ಗುರವೇ ನಮಃ ||
ಶ್ರೀ ಪರೋತ್ತಮ ಧಾರ್ಮಿಕ ಪ್ರತಿಷ್ಠಾನ, ಬೆಂಗಳೂರು
ಅತ್ಯಧಿಕ ಕೋಟಿ ರುದ್ರ ಜಪ
ಸಾಂಗತಾ ಯಾಗ
ATYADHIKA KOTI RUDRA JAPA SANGATA YAGA

ದಿವ್ಯ ಸಂಕಲ್ಪ: ಪರಮಪೂಜ್ಯ ಶ್ರೀ ಶ್ರೀ ಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜರು
ಯಾಗ ಪ್ರಾರಂಭಕ್ಕೆ ಬಾಕಿ ಇರುವ ಸಮಯ
ಯಾಗದ ದಿವ್ಯ ಸಂಕಲ್ಪ
ಶ್ರೀ ಪರೋತ್ತಮ ಧಾರ್ಮಿಕ ಪ್ರತಿಷ್ಠಾನವು ‘ರುದ್ರ ಬಳಗ (ಬೆಂಗಳೂರು)’ ದ ಸಹಕಾರದೊಂದಿಗೆ ಅತ್ಯಧಿಕ ಕೋಟಿ ರುದ್ರ ಜಪ ಸಾಂಗತಾ ಮಹಾಯಾಗವನ್ನು ೨೦೩೦ರ ಜನವರಿ ತಿಂಗಳ ೧೮ ರಿಂದ ೩೦ ರವರೆಗೆ ಆಯೋಜಿಸಿದೆ. ಈ ಯಾಗದ ದಿವ್ಯ ಸಂಕಲ್ಪವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜರು ೦೮/೧೧/೨೦೨೦ ರಂದು ಶಿವಮೊಗ್ಗದಲ್ಲಿ ಮಾಡಿರುತ್ತಾರೆ.
ಇದರ ಅಂಗವಾಗಿ, ೨೦೨೦ ರಿಂದ ರಾಜ್ಯದೆಲ್ಲೆಡೆ ಸಾವಿರಾರು ವಿಪ್ರ ಬಾಂಧವರು — ಶ್ರೀ ರುದ್ರ ಪುರಶ್ಚರಣೆಯನ್ನು ಸಾಮೂಹಿಕವಾಗಿಯೂ ಹಾಗೂ ಪ್ರತ್ಯೇಕವಾಗಿಯೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಇದು ಅತ್ಯಧಿಕ ಕೋಟಿ ಸಂಖ್ಯೆಯಲ್ಲಿ ೨೦೩೦ ರವರೆಗೆ ಅವಿರತವಾಗಿ ನಡೆಯಲಿದೆ. ಅಂತೆಯೇ ಇದರ ಅಂಗವಾಗಿ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಜಪ ಯಜ್ಞದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ಶಿವ ನಾಮ ಜಪವನ್ನು ನೆರವೇರಿಸುತ್ತಲಿದ್ದಾರೆ.
ಇದರಲ್ಲಿ ತಾವುಗಳೂ ಭಾಗವಹಿಸಬಹುದು
ರುದ್ರ ಪಾರಾಯಣ
ಶ್ರೀ ರುದ್ರ ಪುರಶ್ಚರಣೆಯಲ್ಲಿ ಭಾಗವಹಿಸಲು ಇಚ್ಛಿಸುವ ರುದ್ರಾಧ್ಯಾಯಿಗಳು, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಯಾಗದ ಸಂಕಲ್ಪದೊಂದಿಗೆ ನಿಯಮಿತವಾಗಿ ರುದ್ರ ಪಾರಾಯಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನೆರವೇರಿಸುತ್ತಾ, ಪ್ರತಿ ತಿಂಗಳ ಕೊನೆಯಲ್ಲಿ ತಾವುಗಳು ಮಾಡಿದ ಪಾರಾಯಣದ ಸಂಖ್ಯೆಯನ್ನು ತಿಳಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಈ ಪತ್ರಿಕೆಯ ಕೊನೆಯಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆಮಾಡಿ.
ಓಂ ನಮಃ ಶಿವಾಯ ಜಪ ಯಜ್ಞ
ಭಾಗವಹಿಸಲು ಇಚ್ಛಿಸುವವರು, ನಿಯಮಿತ ರೂಪದಲ್ಲಿ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರವನ್ನು ಜಪ ಮಾಡಿ ಇಲ್ಲವೇ ಇದಕ್ಕಾಗಿ ನಿಗದಿಸಿರುವ ಪುಸ್ತಕದಲ್ಲಿ ಮಂತ್ರವನ್ನು ಸಹಸ್ರ ಸಂಖ್ಯೆಯಲ್ಲಿ ಬರೆದು, ಸಮಾಪ್ತಿಯಾದ ಮೇಲೆ ಪ್ರತಿಷ್ಠಾನಕ್ಕೆ ಸಂಖ್ಯೆಯನ್ನು ನೀಡಬಹುದು.
ಇದರಲ್ಲಿ ಸಮಸ್ತ ಆಸ್ತಿಕ ಭಕ್ತ ಮಹಾ ಜನರು — ಆಬಾಲ ವೃದ್ಧರಾದಿಯಾಗಿ, ಸ್ತ್ರೀಯರು, ಪುರುಷರೆಲ್ಲರೂ ಪಾಲ್ಗೊಳ್ಳಬಹುದು.
ಕಾರ್ಯಕ್ರಮಕ್ಕೆ ಸೇವಾ ಕಾಣಿಕೆ
ಸೇವಾ ಕಾಣಿಕೆಯನ್ನು ನೀಡಲು ಬಯಸುವವರಿಗೆ, ಕೆಳಗಿನ ಖಾತೆಗೆ ನೇರವಾಗಿ ಸಲ್ಲಿಸಬಹುದು.
SRI PAROTTAMA DHARMICA PRATHISTHANA
- A/C Number
- 42435521405
- IFSC Code
- SBIN0004161
- Bank
- State Bank of India
- Branch
- SME Branch, Saraswatipuram, Mysore
- UPI ID
- spdph@sbi

ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ

